ವಿಮಾನದಲ್ಲಿ ಹಾರಲು ಬೋರ್ಡಿಂಗ್ ಪಾಸ್ ಬೇಕಿಲ್ಲ: ಮುಖ ತೋರಿಸಿದರೆ ಸಾಕು…!- ಬೈಬಲ್ ಪ್ರವಾದನೆ – ದಾನಿಯೇಲನು 12:04


ಬೈಬಲ್ ಪ್ರವಾದನೆ – ಬಹು ಜನರು ಅತ್ತಿತ್ತ ತಿರುಗುವರು ತಿಳುವಳಿಕೆಯು ಹೆಚ್ಚುವುದು. ದಾನಿಯೇಲನು 12:04

 ಪ್ರಿಯರೇ ಸತ್ಯವೇದದ ಪ್ರತಿಯೊಂದು ಪ್ರವಾದನಾ ವಾಕ್ಯಗಳು ನಮ್ಮ ಕಣ್ಣ ಮುಂದೆಯೇ ನೆರವೇರುತ್ತಿದೆ ದೇವರ ಬರೋಣವು ಅತಿ ಬೇಗನೆ ನೆರವೇರಲಿದೆ ಅದಕ್ಕಾಗಿ ಸಿದ್ಧರಾಗಿರಿ!!! ಎಚ್ಚರವಾಗಿರಿ!!!

ಇನ್ನು ಮುಂದೆ ಬೆಂಗಳೂರಿಗರಿಗೆ ವಿಮಾನದಲ್ಲಿ ಹಾರಿ ಹೋಗುವುದು ಇನ್ನಷ್ಟು ಸುಲಭವಾಗಲಿದೆ. ಇದಕ್ಕಾಗಿಯೇ ಹೊಸ ಮಾದರಿಯ ಸೇವೆಯೊಂದನ್ನು ಆರಂಭಿಸಿಲು KAI ಮುಂದಾಗಿದೆ. ಬೋರ್ಡಿಂಗ್‌ ಪಾಸ್‌ ಹಿಡಿದು ಉದ್ದ ಕ್ಯೂನಲ್ಲಿ ನಿಲ್ಲುವ ತಾಪತ್ರಯವನ್ನು ತಪ್ಪಿಸಲು ತಂತ್ರಜ್ಞಾನದ ಸಹಾಯದಿಂದ ಹೊಸ ಮಾದರಿಯ ಸೇವೆಯೊಂದನ್ನು ಆರಂಭಿಸಿಲು ಸಿದ್ಧತೆಯೂ ನಡೆದಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KAI)ದಲ್ಲಿ ಪ್ರಯಾಣಿಕರಿಗೆ ಬೋರ್ಡಿಂಗ್‌ನಲ್ಲಿಯೇ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸುವ ಸಲುವಾಗಿ ಹೊಸದಾಗಿ ಬಯೋಮೇಟ್ರಿಕ್ ಸೇವೆಯನ್ನು ಆರಂಭಸಲಾಗುತ್ತಿದೆ. ಇದಕ್ಕಾಗಿ ಫೇಸ್‌ ರೆಗ್ನೇಷನ್ ಅನ್ನು ಅಳವಡಿಸಲಾಗುತ್ತಿದೆ. ಈ ಹೊಸ ಸೇವೆಯಲ್ಲಿ ಪ್ರಯಾಣಿಕರು ಮುಖವನ್ನು ಸ್ಕ್ಯಾನ್ ಮಾಡಿದರೆ ಸಾಕಾಗಿದೆ. ಅದ್ದರಿಂದ ಯಾವುದೇ ಕಾಗದ ಪತ್ರದ ಅವಶ್ಯಕತೆ ಇಲ್ಲ.

  • ಸ್ಮಾರ್ಟ್‌ಫೋನ್ ಮಾದರಿ ತಂತ್ರಜ್ಞಾನ: ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಫೇಸ್‌ ಅನ್‌ಲಾಕ್‌ ಮಾದರಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣದಲ್ಲೂ ಮುಖವನ್ನೇ ಪ್ರಯಾಣಿಕರ ಗುರುತಾಗಿ ಪರಿಗಣಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.
  • ದೇಶದ ಮೊದಲ ವಿಮಾನ ನಿಲ್ದಾಣ: ಫೇಸ್‌ ರೆಗ್ನೇಷನ್ ಸೇವೆಯನ್ನು ಆರಂಭಿಸುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಈ ಮೂಲಕ ತನ್ನ ಪ್ರಯಾಣಿಕರಿಗೆ ಜಾಗತಿಕ ದರ್ಜೆಯ ಅನುಭವನ್ನು ನೀಡಲು ಯೋಜನೆ ಸಿದ್ಧಪಡಿಸಿದೆ.
  • ಪೇಪರ್ ಲೇಸ್: ಇನ್ನು ಕೆಲವೇ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೇಪರ್ ಲೇಸ್ ಆಗಲಿದ್ದು, ಬೋರ್ಡಿಂಗ್‌ ಪಾಸ್‌ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ತಪ್ಪಲಿದೆ. ಪ್ರತಿ ಹಂತದಲ್ಲೂ ಫೇಸ್ ರೆಕಗ್ನೇಷನ್ ಸ್ಕಾನರ್ ಮುಂದೆ ಮುಖ ತೋರಿಸಿದರೆ ಸಾಕು ಎನ್ನಲಾಗಿದೆ.
  • ತಂತ್ರಜ್ಞಾನದ ರಾಜಧಾನಿ: ಬೆಂಗಳೂರನ್ನು ತಂತ್ರಜ್ಞಾನದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವುದಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ ಎನ್ನಲಾಗಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರ ಸಮಯವು ಉಳಿತಾಯವಾಗಲಿದೆ.

share

Leave a Reply

Your email address will not be published. Required fields are marked *