ಇನ್ಮುಂದೆ ನಿಮ್ಮ ದೇಹದಿಂದಲೇ ನಿಮ್ಮ ಮೊಬೈಲ್ ಫೋನ್ ಚಾರ್ಜ್ ಆಗಲಿದೆ!! ಬೈಬಲ್ ಪ್ರವಾದನೆ – ದಾನಿಯೇಲನು 12:04


by

 ಬೈಬಲ್ ಪ್ರವಾದನೆ – ಬಹು ಜನರು ಅತ್ತಿತ್ತ ತಿರುಗುವರು ತಿಳುವಳಿಕೆಯು ಹೆಚ್ಚುವುದು. ದಾನಿಯೇಲನು 12:04

 ಪ್ರಿಯರೇ ಸತ್ಯವೇದದ ಪ್ರತಿಯೊಂದು ಪ್ರವಾದನಾ ವಾಕ್ಯಗಳು ನಮ್ಮ ಕಣ್ಣ ಮುಂದೆಯೇ ನೆರವೇರುತ್ತಿದೆ ದೇವರ ಬರೋಣವು ಅತಿ ಬೇಗನೆ ನೆರವೇರಲಿದೆ ಅದಕ್ಕಾಗಿ ಸಿದ್ಧರಾಗಿರಿ!!! ಎಚ್ಚರವಾಗಿರಿ!!!


ಇನ್ಮುಂದೆ ನಿಮ್ಮ ದೇಹದಿಂದಲೇ ನಿಮ್ಮ ಮೊಬೈಲ್ ಫೋನ್ ಚಾರ್ಜ್ ಆಗಲಿದೆ!! –

ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ, ಈಗಾಗಲೇ ವಿಶ್ವದಲ್ಲಿ ಎಲ್ಲವನ್ನೂ ಸಂಶೋಧಿಸಲಾಗಿದೆ. ಇನ್ಮುಂದೆ ಸಂಶೋಧಿಸಲು ಏನೂ ಬಾಕಿ ಉಳಿದಿಲ್ಲ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದರಂತೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ನಡೆದಿರುವ ಸಂಶೋಧನೆಗಳನ್ನು ಒಂದು ವೇಳೆ ಅವರು ನೋಡಿದ್ದರೆ, ತಲೆತಿರುಗಿ ಬೀಳುತ್ತಿದ್ದರು ಅಲ್ಲವೇ.?

ಹೊಸ ಹೊಸ ಹುಡುಕಾಟ ನಡೆಸುವುದನ್ನು ಮನುಷ್ಯ ಎಂದೂ ಬಿಟ್ಟಿಲ್ಲ. ಇಂದಿನ ಸ್ಮಾರ್ಟ್‌ಫೋನ್‌ ಯುಗವನ್ನು ಮಿಲೇನಿಯಂನ ಸಂಶೋಧನೆ ಎಂದೇ ಹೇಳಲಾಗುತ್ತದೆ. ನಾವು ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಬೆಳವಣಿಗೆಯಿಂದ ಅದನ್ನೂ ಕೂಡ ಮೀರಿ ಸಾಗುತ್ತಿದ್ದೇವೆ. ಅದಕ್ಕೊಂದು ಉದಾಹರಣೆ ಎಂದರೆ, ಮಾನವನ ದೇಹವೇ ಬಳಕೆಯ ಇಂಧನವಾಗಿ ಬದಲಾಗುತ್ತಿದೆ.

ಹೌದು, ನೀವು ಕೇಳಿದ್ದು ನಿಜ. ಆಧುನಿಕ ಜಗತ್ತಿನಲ್ಲಿ ಯಾವ ರೀತಿಯಲ್ಲಿಯಾದರೂ ಸಂಶೋಧನೆ ಜರುಗಬಹುದು ಎಂಬುದನ್ನು ಮಾನವನ ದೇಹವನ್ನೇ ಬಳಕೆಯ ಇಂಧನವಾಗಿ ಮಾರ್ಪಾಡು ಮಾಡುತ್ತಿರುವುದು ಉದಾಹರಣೆಯಾಗಿದೆ. ಆಧುನಿಕ ಜಗತ್ತಿನಲ್ಲಿ ಬಯೋ-ಟೆಕ್ನಾಲಜಿಯು ಕಾಲ್ಪನಿಕ ವಿಜ್ಞಾನದಿಂದ ಆವಿಷ್ಕಾರಗಳ ವಿಜ್ಞಾನವಾಗಿ ಪರಿವರ್ತಿತವಾಗಿದೆ ಎಂದರೆ ಆಶ್ಚರ್ಯವೇ.

 

ಆಲೋಚನೆಯೇ ವಿಶೇಷ! ಮಾನವನಿಗೆ ಬೇಕಿರುವ ಇಂಧನ ಪಡೆಯುವ ಪರಿಕಲ್ಪನೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ನೀರು, ಗಾಳಿ, ಸೂರ್ಯ, ಅಣು ಹೀಗೆ ಹತ್ತಾರು ಮೂಲಗಳಿಂದ ಮಾನವನಿಗೆ ಬೇಕಿರುವ ಇಂಧನ ಶಕ್ತಿಯನ್ನು ಪಡೆಯಲಾಗುತ್ತಿದೆ. ಇಂಧನ ಪಡೆಯುವ ಪರಿಕಲ್ಪನೆಗಳೂ ದಿನದಿಂದ ದಿನಕ್ಕೆ ಹೊಸರೂಪ ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂಧನಕ್ಕೆ ದೇಹದ ಬಳಕೆ ಹೊಂದು ಹೊಸ ಹೆಜ್ಜೆ.

 

ಇನ್ನು ನೀವೇ ನಿಮ್ಮ ಇಂಧನ! ಮಾನವನ ದೈನಂದಿನ ಚಟುವಟಿಕೆಗಳಿಂದ ಇಂಧನ ತಯಾರಿಸುವ ಆಲೋಚನೆಗಳಿಗೆ ಆರ್‌ಸ್ ಟೆಕ್ನಿಕಾದಲ್ಲಿ ಪ್ರಕಟವಾದ ವರದಿಯೊಂದು ಆಕಾರ ನೀಡಿದೆ. ಮಾನವನ ದೇಹ ಉತ್ಪಾದನೆ ಮಾಡುವ ಶಕ್ತಿಯನ್ನೇ ಬಳಸಿಕೊಂಡು ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡಿಕೊಳ್ಳಬಹುದು ಎಂದು ಕಂಡುಹಿಡಿದಿದ್ದಾರೆ.ಈ ಬಗ್ಗೆ ಆರ್‌ಸ್ ಟೆಕ್ನಿಕಾದಲ್ಲಿನ ವರದಿ ವಿವರವಾಗಿ ಪ್ರಕಟಿಸಿದೆ.

 

 

ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬಹುದು! ವೈಜ್ಞಾನಿಕವಾಗಿ ತಿಳಿದಿರುವಂತೆ ನಮ್ಮ ದೇಹ ಪ್ರತಿದಿನ ಸುಮಾರು 2000ದಿಂದ 2,500 ಕ್ಯಾಲರಿಯಷ್ಟು ಶಕ್ತಿಯನ್ನು ಬಳಸುತ್ತದೆ. ಈ ಶಕ್ತಿಯಿಂದ ಮಾನವನ ಕೈಲಿರುವ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಬಹುದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ದೇಹ ಉತ್ಪಾದಿಸುವ ಶಕ್ತಿಯ ಕೆಲ ಭಾಗವನ್ನು ಗೆಜೆಟ್‌ಗಳಿಗೆ ಬಳಸಿಕೊಳ್ಳಬೇಕೆಂಬ ಥಿಯರಿ ಇದೀಗ ಚರ್ಚೆಗೆ ಬರುತ್ತಿದೆ.

 

 

ದೇಹದೊಳಗೆ ಕಸಿ! ಸೈಫನ್ ಸಿಸ್ಟಮ್ ಮೂಲಕ ನಮ್ಮ ದೈನಂದಿನ ಬಳಕೆಯ ಗೆಜೆಟ್‌ಗಳಿಗೆ ಬಳಸಿಕೊಳ್ಳಬೇಕೆಂಬ ಥಿಯರಿ ಇದೀಗ ಚರ್ಚೆಗೆ ಬರುತ್ತಿದೆ.ಅದರಲ್ಲೂ ಬ್ಯಾಟರಿ ಸಹಾಯವಿಲ್ಲದೆ ದೇಹದೊಳಗೆ ವೈದ್ಯಕೀಯ ಕಸಿ ಮಾಡುವುದು ಅಥವಾ ಎಲೆಕ್ಟ್ರಾನಿಕ್ ಲೆನ್‌ಸ್ಗಳನ್ನು ಅಳವಡಿಸುವ ವ್ಯವಸ್ಥೆಯತ್ತ ಸಂಶೋಧಕರು ಆಸಕ್ತರಾಗಿದ್ದಾರೆ ಎಂದು ಆರ್‌ಸ್ ಟೆಕ್ನಿಕಾ ವರದಿಯಲ್ಲಿ ಹೇಳಲಾಗಿದೆ.

 

ಭವಿಷ್ಯದಲ್ಲಿ ಇನ್ನೇನಿದೆಯೋ? ದೇಹದಲ್ಲಿ ಹರಿಯುವ ಶಕ್ತಿಯನ್ನು ಉಪಯೋಗಿಸಿಕೊಂಡು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲು ಮುಂದಾಗಿದ್ದಾರೆ. ಇದೇ ತಂತ್ರಜ್ಞಾನ ಅಭಿವೃದ್ಧಿ ಹೊಂದಿದರೆ ಮುಂದಿನ ದಿನಗಳಲ್ಲಿ ನಾವು ಮೊಬೈಲ್, ಬ್ಲೂಟೂಥ್ ಮೊದಲಾದ ವಸ್ತುಗಳನ್ನು ಚಾರ್ಜ್ ಮಾಡಲು ಪ್ಲಗ್ ಹುಡುಕಬೇಕಾದ ಅವಶ್ಯಕತೆ ಇರುವುದಿಲ್ಲ. ಯಾಕೇಂದರೆ, ನಾವೇ ಆಗ ‘ಪವರ್ ಹೌಸ್’.!!

 

http://go4g.airtel.in/nd/?pid=3415301&anam=Gizbot&psnam=HPAGES&pnam=tbl4_home_page&pos=0&pi=3&wsf_ref=%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8|Tab:unknown

share

Leave a Reply

Your email address will not be published. Required fields are marked *